Manjunath Uttarkar
Talk on Library services in NAYISOCH
Updated: Feb 25, 2020
ಗದಗಿನ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ ನ ವತಿಯಿಂದ, ‘ನಯಿ ಸೋಚ್’ ಕಾರ್ಯಕ್ರಮದಲ್ಲಿ ಇಂದು, ಕಾಲೇಜಿನ ಮುಖ್ಯ ಲೈಬ್ರರಿಯನ್ ಮಂಜುನಾಥ್ ಉತ್ತರಕರ, ತಮ್ಮ ಭಾಷಣದ ಸಾರವನ್ನು ‘ಲೈಬ್ರರಿ ಆಜ್ ಎ ಲರ್ನಿಂಗ್ ಸ್ಪೇಸ್’ ಎಂಬ ವಿಚಾರಸರಣಿಯ ಮುಖಾಂತರ ವಿದ್ಯಾರ್ಥಿಗಳ ಮುಂದಿಟ್ಟರು. ಅವರು – ‘ಮನುಷ್ಯನಿಗೆ ಎಲ್ಲ ಅಂಗಗಳಿಗಿಂತ ಮೆದುಳು ಹೇಗೆ ಮುಖ್ಯವೋ ಹಾಗೆಯೇ ವಿದ್ಯಾಭ್ಯಾಸಕ್ಕೆ ಲೈಬ್ರರಿ ಅತಿ ಮುಖ್ಯ ಅಂಗವಾಗಿದೆ’ ಎಂದರು.
ಯಾವ ದೇಶದಲ್ಲಿ ತನ್ನೆಲ್ಲಾ ಪ್ರಜೆಗಳು ಸುಶಿಕ್ಷಿತರೋ, ಆ ದೇಶವು ಸುಖ ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುತ್ತದೆ. ಒಂದು ಪುಸ್ತಕ, ಓದುಗನ ಜೀವನಶೈಲಿಯನ್ನೇ ಬದಲಿಸಬಹುದು. ಎಡ್ಜುಕೇಶನ್ ಎಂಬುದು ಎಂಟರ್ಟೈನಿಂಗ್ ಆದಾಗ, ಅದು ಓದುಗನಿಗೆ ಸಂತೋಷವನ್ನು ಕೊಡಬಲ್ಲುದು. ಓದುಗ ಸಂತೋಷ ಹೊಂದಬೇಕಾದರೆ ಅವನಿಗೆ ಬೇಕೆನ್ನಿಸುವ ಮಾಹಿತಿ ಅಥವಾ ಪುಸ್ತಕ, ಅವನಿಗೆ ಸುಲಭವಾಗಿ ದೊರೆಯುವಂತಾಗಬೇಕು.
ಓದುಗನ ಈ ಅವಶ್ಯಕತೆಯನ್ನು ಪೂರೈಸಲು ದೇಶದ ಎಲ್ಲಾ ಪ್ರಮುಖ ವಿದ್ಯಾಸಂಸ್ಥೆಗಳಾದ ಐಐಟಿ, ಐಐಎಂ, ಮತ್ತು ಇತರ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಲೈಬ್ರರಿಗಳನ್ನು ಒಂದೇ ಸೂರಿನಡಿಯಲ್ಲಿ ತಂದು, ಪುಸ್ತಕಗಳನ್ನು ಎರವಲು ಪಡೆಯುವ ಡೆಲ್ ನೆಟ್ ಮತ್ತು ಕೆನಿಂಬಸ್ ಎಂಬ ವ್ಯವಸ್ತೆಯ ಪರಿಚಯ ಮಾಡಿಸಿ, ಅದಕ್ಕೆ ಮೆಂಬರ್ ಆಗುವುದರ ಬಗ್ಗೆ ಮಾಹಿತಿ ನೀಡಿದರು. ಇದಲ್ಲದೆ ಕಾಲೇಜಿನ ಲೈಬ್ರರಿಯಲ್ಲಿ ಸುಲಭವಾಗಿ ದೊರೆಯುವ ಇ-ಜರ್ನಲ್ ಗಳಾದ ಐಇಇಇ, ಎಲ್ಸೆವೈರ್, ಸ್ಪ್ರಿಂಜರ್, ಎಎಸ್ಎಮ್ಇ, ಎಎಸ್ ಸಿಇ, ಟೈಲರ್ ಫ್ರಾನ್ಸಿಸ್ ಮತ್ತು ಪ್ರೊಕ್ವೆಸ್ಟ್ ಇತ್ಯಾದಿ ಪೋರ್ಟಲ್ ಗಳಿಂದ ಸಂಶೋಧನೆಗೆ ಮತ್ತು ಪ್ರಾಜೆಕ್ಟ್ ಗೆ ಬೇಕಾಗುವ ಮಾಹಿತಿಯುಳ್ಳ ಪೇಪರ್ ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದು ಹೇಳಿದರು. ಕಲಿಯುವುದಕ್ಕೆ ಡಿಜಿಟಲ್ ಕ್ರಾಂತಿಯಿಂದಾಗಿ ಬಹಳ ಮುನ್ನಡೆಯಾಗಿದೆ. ಏನೇ ಮಾಹಿತಿ ನಮ್ಮ ಬೆರಳ ತುದಿಯಲ್ಲೇ ಇದೆ. ಇದನ್ನು ಇಂದಿನ ಯುವಪೀಳಿಗೆ ಉಪಯೋಗಿಸಿಕೊಂಡು ಭಾರತ ಜಗತ್ತಿಗೇ ತಂತ್ರಜ್ಞಾನ ಒದಗಿಸುವಂತಹ ದಿನಗಳು ತಮ್ಮಿಂದ ಬೇಗ ಬರಲಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಪ್ರೊಫೆಸರ್ ಜಿ. ಎಸ್. ಶಿವನಗುತ್ತಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವ್ಹೈಸ್ ಪ್ರಿನ್ಸಿಪಾಲ್ ಡಾ. ಈರಣ್ಣ ಕೋರಚಗಾಂವ ವಂದಿಸಿದರು.